ಮೆಗಾ ಸ್ಟಾರ್ ಚಿರಂಜೀವಿ ಜೊತೆ ಶಾಸಕ ಪ್ರದೀಪ್ ಈಶ್ವರ್ ಅಭಿನಯ; ಸಿನಿಮಾ ಯಾವುದು?

author-image
admin
Updated On
ಮೆಗಾ ಸ್ಟಾರ್ ಚಿರಂಜೀವಿ ಜೊತೆ ಶಾಸಕ ಪ್ರದೀಪ್ ಈಶ್ವರ್ ಅಭಿನಯ; ಸಿನಿಮಾ ಯಾವುದು?
Advertisment
  • ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಟಾಲಿವುಡ್‌ನಿಂದ ಆಫರ್‌
  • ಮೆಗಾಸ್ಟಾರ್‌ ಚಿರಂಜೀವಿ ಜೊತೆ ಡ್ಯಾನ್ಸ್ ಮಾಡೋದು ನನ್ನ ಆಸೆ
  • ಟಾಲಿವುಡ್‌ನಲ್ಲಿ ಸಿನಿಮಾ ಮಾಡಲು ಚರ್ಚೆ ನಡೆಸಿರುವ ಪ್ರದೀಪ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ರಾಜಕೀಯದ ಜೊತೆ, ಜೊತೆಗೆ ಬಣ್ಣದ ಲೋಕಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಪ್ರದೀಪ್ ಈಶ್ವರ್ ಅವರಿಗೆ ಟಾಲಿವುಡ್‌ನಿಂದ ಬಿಗ್‌ ಆಫರ್‌ ಒಂದು ಬಂದಿದೆ ಅನ್ನೋ ಮಾತು ಕೇಳಿ ಬಂದಿತ್ತು. ಪ್ರದೀಪ್ ಈಶ್ವರ್ ಅವರೇ ಖುದ್ದು ಈ ಬಗ್ಗೆ ಮಾಹಿತಿ ನೀಡಿ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡೈಲಾಗ್ ಕಿಂಗ್‌ ಅಂತಲೇ ಫೇಮಸ್ ಆಗಿರೋ ಶಾಸಕ ಪ್ರದೀಪ್ ಈಶ್ವರ್ ಅವರು ಸಿನಿಮಾದಲ್ಲಿ ಅಭಿನಯಿಸುತ್ತಾ ಇರೋದು ಅವರ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ.

ಇದನ್ನೂ ಓದಿ: ಆಂಧ್ರ ರಾಜಕೀಯಕ್ಕೆ ಬಿಗ್​ ಟ್ವಿಸ್ಟ್​​.. ಪವನ್​ ಕಲ್ಯಾಣ್​​ ಗೆಲ್ಲಿಸಲು ಅಖಾಡಕ್ಕಿಳಿದ ಮೆಗಾಸ್ಟಾರ್​​ ಚಿರಂಜೀವಿ! 

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಪ್ರದೀಪ್ ಈಶ್ವರ್‌ ಅವರು ಹೌದು ನನಗೆ ಟಾಲಿವುಡ್‌ನ ಸಿನಿಮಾ ಮಾಡಲು ಆಫರ್ ಬಂದಿರೋದು ನಿಜ. ನಾನು ಮೆಗಾಸ್ಟಾರ್ ಚಿರಂಜೀವಿ ಅವರ ದೊಡ್ಡ ಅಭಿಮಾನಿ. ನಾನು ಅವರ ಸಮುದಾಯದ ಹುಡುಗ. ಕರ್ನಾಟಕದಲ್ಲಿ ಅವರ ಸಮುದಾಯದಲ್ಲಿ ಗೆದ್ದಿರೋ ಏಕೈಕ ಶಾಸಕನಾಗಿದ್ದೇನೆ ಎಂದಿದ್ದಾರೆ.


">November 9, 2023

ಇದನ್ನೂ ಓದಿ: BREAKING: ಮೆಗಾ ಸ್ಟಾರ್ ಚಿರಂಜೀವಿ ಮಾಜಿ ಅಳಿಯ ಹಠಾತ್ ನಿಧನ; ಕಾರಣವೇನು? 

ಮೆಗಾಸ್ಟಾರ್‌ ಚಿರಂಜೀವಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಮನೆಗೆ ಕರೆಸಿದ್ದರು. ಪವನ್ ಕಲ್ಯಾಣ್ ಅವರು ಗೆದ್ದ ಮೇಲೆ ನಾನು ಫೋನ್ ಮಾಡಿ ವಿಶ್ ಮಾಡಿದ್ದೇನೆ. ತೆಲುಗು ಚಿತ್ರರಂಗದಲ್ಲೂ ನಾನು ಕ್ಲೂಸ್ ಆಗಿದ್ದೇನೆ. ನನಗೆ ಚಿರಂಜೀವಿ ಹಾಗೂ ಅವರ ಕುಟುಂಬಕ್ಕೆ ತುಂಬಾ ಹತ್ತಿರದಲ್ಲಿ ಇದ್ದೇನೆ. ಹೀಗಾಗಿ ಟಾಲಿವುಡ್‌ನಲ್ಲಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ.

ಚಿರಂಜೀವಿ ಜೊತೆ ನಟನೆ ಹಾಗೂ ಡ್ಯಾನ್ಸ್ ಮಾಡಬೇಕು ಎಂಬುದು ನನ್ನ ಆಸೆ. ಚಿರಂಜೀವಿ ಅವರ ಈಗಿನ ವಿಶ್ವಾಂಬರ ಚಿತ್ರದಲ್ಲಿ ನಾನು ನಟನೆ ಮಾಡುತ್ತಿಲ್ಲ. ಚಿರಂಜೀವಿ ಅವರ ಮುಂದಿನ ಸಿನಿಮಾದಲ್ಲಿ ಯಾವ ಪಾತ್ರ ಕೊಟ್ಟರೂ ಮಾಡುತ್ತೇನೆ. ಅವರೇ ಈ ಬಗ್ಗೆ ಅನೌನ್ಸ್ ಮಾಡಲಿ ಅಂತ ನಾನು ಸುಮ್ಮನಿದ್ದೇನೆ ಎಂದು ಪ್ರದೀಪ್ ಈಶ್ವರ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment